Banner

December 18, 2021

ಮಂಗಳೂರು ವಿಶ್ವವಿದ್ಯಾನಿಲಯ ನಡೆಸುವ ಅಂತಿಮ ವರ್ಷ  ಪೈನಾನ್ಶಿಯಲ್ ಎಕೌಂಟಿಗ್‌ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದುಕೊಂಡ ಕಾಲೇಜಿನ ಐವರು ವಿದ್ಯಾರ್ಥಿನಿಯರನ್ನು  ಸಮ್ಮಾನಿಸಲಾಯಿತು‌. ಮುನ್ನೂರು ಅಂಕಗಳ ಪರೀಕ್ಷೆಯಲ್ಲಿ ಕುಂದಾಪುರದ ಬಿ.ಬಿ‌. ಹೆಗ್ಡೆ  ಕಾಲೇಜಿನ ಪ್ರತೀಕ್ಷಾ, ಅಂಕಿತಾ, ಸುಚಿತ್ರಾ ಶೆಟ್ಟಿ, ಬಿಬಿ ಹಾಜಿರಾ, ಅನನ್ಯ, ಮುನ್ನೂರು ಅಂಕಗಳನ್ನು ಪಡೆದಿದ್ದಾರೆ.‌ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಇಂತಹ ಅಪರೂಪದ  ಸಾಧನೆಗೆ ಬಿ.ಬಿ ಹೆಗ್ಡೆ ಕಾಲೇಜು ಸಾಕ್ಷಿಯಾಗಿದೆ. ಎಲ್ಲಾ ವಿದ್ಯಾರ್ಥಿನಿಯರನ್ನು ಅವರ  ಹೆತ್ತವರ ಸಮ್ಮುಖದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಹುಂತ್ರಿಕೆ ಸುಧಾಕರ ಶೆಟ್ಟಿಯವರು ಸಮ್ಮಾನಿಸಿದರು.‌ ಈ ಸಂದರ್ಭದಲ್ಲಿ ಕುಂದಾಪುರ ಕೋಸ್ಟಲ್ ಲಯನ್ಸ್ ಕ್ಲಬ್‌ನ ಉಪಾಧ್ಯಕ್ಷರಾದ ಕಂದಾವರ ಸತೀಶ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.‌ ಉಮೇಶ್ ಶೆಟ್ಟಿ, ಉಪನ್ಯಾಸಕ ಸತೀಶ ಶೆಟ್ಟಿ ಹೆಸ್ಕತ್ತೂರು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಸಹ ಸಂಯೋಜಕಿ ಲೋನಾ ಡಿ ಸೋಜಾ ಹಾಗೂ  ಬೋಧಕ, ಬೋಧಕೇತರರು, ಉಪಸ್ಥಿತರಿದ್ದರು.

© 2022 Dr. B. B. Hegde First Grade College, Kundapura - All Rights Reserved