January 26, 2022
ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿಯಾಗಿ ಆಚರಿಸಲ್ಪಟ್ಟಿತು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಬೈಂದೂರು ಶಾಸಕರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿಯವರು ಧ್ವಜಾರೋಹಣ ನೆರವೇಸಿದರು. ನಂತರ ಮಾತನಾಡಿದ ಅವರು, ನಾವು ಸಮಾನತೆಯಿಂದ ಶಿಕ್ಷಣ ಕಲಿಯುತ್ತಿರುವುದೇ ಸಂವಿಧಾನ ಜಾರಿಗೆ ಬಂದದ್ದರಿಂದ. ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆಯೇ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವತಂತ್ರ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುವುದು. ಹಾಗೆ ಶೈಕ್ಷಣಿಕ ಸಂಸ್ಥೆಗಳು ಕೋವಿಡ್ ಅಲೆಗಳನ್ನು ಎದುರಿಸುತ್ತಿವೆ, ಇಂತಹ ಸಂದರ್ಭದಲ್ಲಿಯೂ ಕೂಡ ಕಾಲೇಜಿನಲ್ಲಿಯೇ ಅಪರೂಪದ ಭಜನೆಯಂತಹ ವಿವಿಧ ಸಾಂಸ್ಕೃತಿಕ ತಂಡ, ಯುನಿವರ್ಸಿಟಿಯಲ್ಲಿ ಐದು ಗೋಲ್ಡ್ ಮೆಡಲ್ ಹೀಗೆ ವ್ಯವಸ್ಥಿತವಾದ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕಗಳ ಮೂಲಕ ಈ ನಮ್ಮ ಕಾಲೇಜು ಮುಂಚೂಣಿಯಲ್ಲಿದೆ. ಇದೆಲ್ಲದರ ಮೂಲ ಉದ್ದೇಶ ಗ್ರಾಮೀಣ ಮಕ್ಕಳಿಗೆ ಉತ್ಕೃಷ್ಟ ಶಿಕ್ಷಣ ಸಿಗಬೇಕು ಎಂಬುದು ಎಂದು ಶುಭ ಹಾರೈಸಿದರು.
ನಂತರ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗಿಶ್ ಕಾಂಚನ್ ಅವರಿಗೆ ಗೌರವಿಸಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಎನ್‌ಸಿಸಿಯ ವಿದ್ಯಾರ್ಥಿಗಳಿಂದ ಸುಂದರವಾದ ಪಥ ಸಂಚಲನ ನಡೆಯಿತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರಿನ ಯುವ ಉದ್ಯಮಿ ದಾನಿಗಳಾದ ಶಂಕರ್ ಪೂಜಾರಿ, ಎನ್‌ಸಿಸಿ ಅಧಿಕಾರಿ ಉಪನ್ಯಾಸಕ ಶಿವರಾಜ್ ಸಿ., ಸಹ ಸಂಯೋಜಕ ಸುಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾವಿರದ ಇನ್ನೂರು ವಿದ್ಯಾರ್ಥಿಗಳ ಜೊತೆಗೆ ಬೋಧಕ ಬೋಧಕೇತರರು ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ತಂದಿತು. ಉಪನ್ಯಾಸಕ ಸತೀಶ್ ಶೆಟ್ಟಿ ನಿರೂಪಿಸಿ ವಂದಿಸಿದರು.