• September 28, 2021

ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನ 2019-20ರ ಶೈಕ್ಷಣಿಕ ವರ್ಷದ 'ಶಿಖರ' ವಾರ್ಷಿಕ ಸಂಚಿಕೆಯನ್ನು ಎಂಆರ್‌ಪಿಎಲ್ ಮಂಗಳೂರು ಇಲ್ಲಿನ ಅಸಿಸ್ಟೆಂಟ್ ಮ್ಯಾನೇಜರ್ ಡಾ‌. ಸಂಪತ್  ಕುಮಾರ್ ಹೆಚ್.ಸಿ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ. ವಾರ್ಷಿಕ ಸಂಚಿಕೆ ವರ್ಷದ ಕಾರ್ಯಕ್ರಮಗಳ ಜೊತೆಗೆ ಸಂಸ್ಥೆಯ ಗುಣಮಟ್ಟದ ಪ್ರತೀಕ ಆಗಿರುತ್ತದೆ ಎಂದು ಶುಭಹಾರೈಸಿದರು.

ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಬೈಂದೂರು ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ, ಯುನಿವರ್ಸಲ್ ಗ್ರೂಫ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಅಧ್ಯಕ್ಷರಾದ ಆರ್.ಉಪೇಂದ್ರ ಶೆಟ್ಟಿ, ಉಳ್ತೂರು ಮೋಹನದಾಸ ಶೆಟ್ಟಿ, ಬಿ.ಎಸ್‌. ಸುರೇಶ ಶೆಟ್ಟಿ, ವಸಂತ್ ಗಿಳಿಯಾರ್ ಮತ್ತು ಪ್ರಾಂಶುಪಾಲರಾದ ಪ್ರೊ .ಕೆ. ಉಮೇಶ್ ಶೆಟ್ಟಿ,  ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಿವರಾಜ್ ಸಿ. ಅರೆಹೊಳೆ, ವಿದ್ಯಾರ್ಥಿ ಕ್ಷೇಮಪಾಲನ ಕಾರ್ಯದರ್ಶಿ ಸಂಪತ್ ಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌.

ವಾರ್ಷಿಕ ಸಂಚಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾದ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಮತ್ತು ಸಂಪಾದಕೀಯ ಮಂಡಳಿಯ ಸದಸ್ಯರಾದ , ಸುಧೀರ್ ಕುಮಾರ್, ಅಮೃತಾ, ಹರೀಶ್ ಬಿ., ವನಿತಾ ಜಿ., ಆಶಾ ಶೆಟ್ಟಿ ಹಾಗೂ ವಿದ್ಯಾರ್ಥಿ ಸಂಪಾದಕರಿಗೆ ಸಂಚಿಕೆಯನ್ನು ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.‌ ಸಂಪಾದಕೀಯ ಸದಸ್ಯರಾದ ರಕ್ಷಿತ್ ರಾವ್ ಸ್ವಾಗತಿಸಿ, ರೇಷ್ಮಾ ಶೆಟ್ಟಿ ವಂದಿಸಿ, ಪ್ರವೀಣ್ ಮೊಗವೀರ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು

© 2021 Dr. B. B. Hegde First Grade College, Kundapura - All Rights Reserved