October 3, 2021
ಡಾ. ಬಿ.ಬಿ. ಕಾಲೇಜು ಕುಂದಾಪುರ ಇಲ್ಲಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳ ತಂಡ ಬಸ್ರೂರಿನ ಐತಿಹಾಸಿಕ ಸ್ಥಳಗಳಾದ ತುಳುವೇಶ್ವರ ಶಿವ ದೇಗುಲ ಹಾಗೂ ಗುಪ್ಪಿ ಸದಾನಂದ ದೇಗುಲ ವೀಕ್ಷಣೆ ಮಾಡಿದರು.
ಸ್ವರಾಜ್ಯ 75 ಕಾರ್ಯಕ್ರಮದ ಸಂಚಾಲಕ ಶ್ರೀ ಪ್ರದೀಪ್ ಕುಮಾರ್ ಬಸ್ರೂರು ದೇಗುಲಗಳ ಐತಿಹಾಸಿಕ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಎನ್ .ಎಸ್.ಎಸ್ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ, ಸಹ ಯೋಜನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ್ ಶೆಟ್ಟಿ ನೈಕಂಬ್ಳಿ, ನಿಕಟಪೂರ್ವ ಎನ್.ಎಸ್.ಎಸ್ ಯೋಜನಾಧಿಕಾರಿ ಸತೀಶ್ ಶೆಟ್ಟಿ, ಸುಕುಮಾರ ಶೆಟ್ಟಿ ಕಮಲಶಿಲೆ, ರಸಿಕ್ ಶೆಟ್ಟಿ, ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕಿ ಸುಷ್ಮಾ ಶೆಟ್ಟಿ , ಸ್ವಯಂಸೇವಕರು ಹಾಗೂ ಸ್ವರಾಜ್ಯ 75 ತಂಡದ ಸದಸ್ಯರಾದ ಸಂತೋಷ ನೇರಳಕಟ್ಟೆ, ಸಂತೋಷ ಬಳ್ಕೂರು, ಭಾರ್ಗವ ಜೋಗಿ, ಸತೀಶ್ ಗುಂಡ್ಮಿ, ಭರತ್ ಗುಡಿಗಾರ್, ಪ್ರಶಾಂತ್ ಖಾರ್ವಿ, ರಾಘವೇಂದ್ರ ಬಳ್ಕೂರು ಉಪಸ್ಥಿತರಿದ್ದರು.