September 27, 2021
ಡಾ.ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ಆಯೋಜಿಸಿದ “ಸ್ವಾತಂತ್ರ್ಯ ಅಮೃತ ಮಹೋತ್ಸವದ - ಫಿಟ್ ಇಂಡಿಯಾ ಫ್ರೀಡಂ ರನ್-2.0” ಜಾಥಾವನ್ನು ಎಂಆರ್‌ಪಿಎಲ್ ಮಂಗಳೂರು ಇಲ್ಲಿನ ಡಾ. ಸಂಪತ್ ಕುಮಾರ್ ಹೆಚ್.ಸಿ ಯವರು ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ .ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಎನ್.ಎಸ್.ಎಸ್ ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ, ಸಹ ಯೋಜನಾಧಿಕಾರಿ ಶ್ರೀಮತಿ ರೇಷ್ಮಾ ಶೆಟ್ಟಿ, ಎನ್.ಸಿ. ಸಿ ಆಧಿಕಾರಿ ಶಿವರಾಜ್ .ಸಿ. ಅರೆಹೊಳೆ, ಉಪನ್ಯಾಸಕ ರಕ್ಷಿತ್ ರಾವ್ ಗುಜ್ಜಾಡಿ, ನಾಗರಾಜ್ ನೈಕಂಬ್ಳಿ ಉಪಸ್ಥಿತರಿದ್ದರು.
ತದನಂತರ ಕಾಲೇಜಿನ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕದ ಸ್ವಯಂಸೇವಕರೊಂದಿಗೆ ಕಾಲೇಜಿನಿಂದ ಕುಂದಾಪುರಕ್ಕೆ ಸರಿಸುಮಾರು ಎರಡು ಕಿಲೋ ಮೀಟರ್ ಜಾಥಾ ಹಮ್ಮಿಕೊಳ್ಳಲಾಯಿತು.