Banner

October 1, 2021

ಈ ಟೀನೇಜಿನ ಮೋಹಗಳು, ನಮ್ಮ ಗುರಿಯೆಡೆಗಿನ ದಾರಿ ತಪ್ಪಿಸಬಾರದು. ಕನಸು ಕಾಣುವುದಷ್ಟೆ ಅಲ್ಲ, ದಿನನಿತ್ಯ ಅದನ್ನೆ ಯೋಚಿಸಬೇಕು, ಅದನ್ನು ಸಾಧಿಸುವ ಮಾರ್ಗವೇ ನಿತ್ಯದ ತಪನ ಆಗಿರಬೇಕು. ಇಂತಹ ಪರಿಶ್ರಮವಿದ್ದರೆ ಮಹತ್ವದ ಕನಸುಗಳು ನನಸಾಗುತ್ತದೆ ಎಂದು ಪತ್ರಕರ್ತ, ಸಾಂಸ್ಕೃತಿಕ ಚಿಂತಕ ವಸಂತ್ ಗಿಳಿಯಾರ್ ಹೇಳಿದರು.

ಅವರು ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇಲ್ಲಿನ ಪ್ರಥಮ ವರ್ಷದ ಪದವಿ ಪ್ರವೇಶಾರ್ಥಿಗಳಿಗೆ ಪರಿಚಯ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಪ್ರೊ. ಕೆ. ಉಮೇಶ್ ಶೆಟ್ಟಿ ವಹಿಸಿಕೊಂಡಿದ್ದರು. ಉಪಸ್ಥಿತರಿದ್ದ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು‌. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದೀಪ್ ಶೆಟ್ಟಿ ಆಜ್ರಿ ಮತ್ತು ಬೋಧಕರು ಹಾಗೂ ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಥ್ವಿಶ್ರೀ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.‌ ಉಪನ್ಯಾಸಕಿ ಆಶಾ ಶೆಟ್ಟಿ ನಿರೂಪಿಸಿ,  ಉಪನ್ಯಾಸಕ ರಕ್ಷಿತ್ ರಾವ್ ಗುಜ್ಜಾಡಿ ವಂದಿಸಿದರು.

© 2022 Dr. B. B. Hegde First Grade College, Kundapura - All Rights Reserved