October 9, 2021
ಕಾರ್ಕಳದ ನಕ್ರೆಯಲ್ಲಿ ನಡೆದ NCC Fire ಕ್ಯಾಂಪ್‌ನಲ್ಲಿ ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್. ಸಿ.ಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಅದರಲ್ಲಿ ಉತ್ತಮ ಫೈರಿಂಗ್ ನಡೆಸಿದ ಏಳು ವಿದ್ಯಾರ್ಥಿಗಳನ್ನು ಕಾಲೇಜಿನ ಬೆಸ್ಟ್ ಫೈರಿಂಗ್ ಕೆಡೆಟ್ ಗಳೆಂದು ಗುರುತಿಸಿ, ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಎನ್‌ಸಿಸಿ ಅಧಿಕಾರಿ ಶಿವರಾಜ್ ಸಿ. ಅರೆಹೊಳೆ ಈ ವಿದ್ಯಾರ್ಥಿಗಳನ್ನು ತರಬೇತುಗೊಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.