Banner

November 11, 2021

ಉದ್ಯಮಿಗಳಾಗಿ ಅನೇಕರಿಗೆ ಉದ್ಯೋಗವನ್ನು ನೀಡಿದ ಡಾ‌.ಬಿ.ಬಿ. ಹೆಗ್ಡೆಯವರು, ವೈದ್ಯರಾಗಿ ಕೂಡ ಸೇವೆ ಸಲ್ಲಿಸಿದವರು. ಸಮಾಜದ ಸಮಸ್ಯೆಗಳಿಗೆ ಶಿಕ್ಷಣದ ಮೂಲಕ ಚಿಕಿತ್ಸೆ ನೀಡುವ ಕಾರ್ಯ ಆರಂಭಿಸಿದ ಡಾ.ಬಿ.ಬಿ. ಹೆಗ್ಡೆಯವರ ಸಂಸ್ಮರಣೆಯನ್ನು ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಗಿತ್ತು. ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ದೀಪ ಬೆಳಗಿ, ಪುಷ್ಪನಮನ ಸಲ್ಲಿಸಿದರು. ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ನಂತರ ಬೋಧಕ ಬೋಧಕೇತರರು ಉಪಸ್ಥಿತರಿದ್ದು ಮೌನ ಪ್ರಾರ್ಥನೆ ಸಲ್ಲಿಸಿದರು.‌ ಉಪನ್ಯಾಸಕಿ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಶ್ರೀ ಸೌಮ್ಯ ಕುಂದರ್ ನಿರೂಪಿಸಿ ವಂದಿಸಿದರು.

© 2022 Dr. B. B. Hegde First Grade College, Kundapura - All Rights Reserved