Banner

December 8, 2021

ಕುಂದಾಪುರದ ಡಾ‌.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಪೂರೈಸಿದ ಐದು ವಿದ್ಯಾರ್ಥಿಗಳು  ಪೈನಾನ್ಶಿಯಲ್ ಎಕೌಂಟಿಗ್‌ನಲ್ಲಿ ಮುನ್ನೂರಕ್ಕೆ ಮುನ್ನೂರು ಅಂಕಗಳನ್ನು ಪಡೆದುಕೊಂಡಿದ್ದಾರೆ‌. ಈ  ಜಿಲ್ಲೆಯಲ್ಲಿಯೇ ಇದೊಂದು ವಿಶಿಷ್ಠ ಸಾಧನೆಗೆ ಕಾಲೇಜು ಸಾಕ್ಷಿಯಾಗಿದೆ. ಕಾಲೇಜಿನ‌ ಸಾಧನೆಯ ಕಿರೀಟಕ್ಕೆ ಐದು ಚಿನ್ನದ ಗರಿ ಎಂದು ಎಂದು ಪ್ರಾಂಶುಪಾಲರಾದ ಪ್ರೊ‌.‌ಕೆ.ಉಮೇಶ್ ಶೆಟ್ಟಿ ತಿಳಿಸಿದ್ದಾರೆ.

ಪ್ರತೀಕ್ಷಾ, ಅಂಕಿತಾ, ಸುಚಿತ್ರಾ ಶೆಟ್ಟಿ, ಬಿಬಿ ಹಾಜಿರಾ, ಅನನ್ಯ, ಎನ್ನುವವರು ಈ ಸಾಧನೆಗೈದ ವಿದ್ಯಾರ್ಥಿನಿಯರು. ಈ  ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರರು, ಅಭಿನಂದನೆ ಸಲ್ಲಿಸಿದ್ದಾರೆ.

© 2022 Dr. B. B. Hegde First Grade College, Kundapura - All Rights Reserved