December 18, 2021
ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಎನ್‌ಸಿಸಿ ಆರ್ಮಿ ಘಟಕದ ಆಯೋಜನೆಯಲ್ಲಿ ಕುಂದಾಪುರದಿಂದ ಮರವಂತೆ ತನಕ ಸೈಕಲ್ ಜಾಥಾವನ್ನು ಡಿಸೆಂಬರ್ 18ರಂದು ಬೆಳಿಗ್ಗೆ ಹಮ್ಮಿಕೊಳ್ಳಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನಾರಾಯಣ ನಾಯ್ಕ್ ಎನ್‌ಸಿಸಿ ಧ್ವಜ ಏರಿಸುವುದರ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ನಾಗರಿಕ ಸಮಾಜವನ್ನು ಎಚ್ಚರಿಸುವ ಭಿತ್ತಿ ಪತ್ರಗಳನ್ನು ಹೊಂದಿರುವ, ವಿವಿಧ ಸಾಮಾಜಿಕ ಸಂದೇಶ ಸಾರುವ ಸೈಕಲ್‌ಗಳಲ್ಲಿ ವಿದ್ಯಾರ್ಥಿಗಳು ಕಾಲೇಜಿನಿಂದ ಮರವಂತೆ ಬೀಚ್ ತನಕ ಪಯಣಿಸಿದರು.
ಶ್ರೀ ಸದಾಶಿವ್ ಆರ್ ಗೌರೋಜಿ ಠಾಣಾಧಿಕಾರಿಗಳು, ಕುಂದಾಪುರ ಮತ್ತು ಪ್ರೊ. ಕೆ. ಉಮೇಶ್ ಶೆಟ್ಟಿ ಪ್ರಾಂಶುಪಾಲರು, ಶಿವರಾಜ್ ಸಿ. ಎನ್‌ಸಿಸಿ ಅಧಿಕಾರಿ ಮತ್ತು ಸಹ ಸಂಯೋಜಕ ಸುಜಯ್ ಹಾಗೂ ಕಾಲೇಜಿನ ಬೋಧಕ ಬೋಧಕೇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಕುಮಾರಿ ಸೌಮ್ಯ ಕುಂದರ್ ನಿರೂಪಿಸಿ ವಂದಿಸಿದರು.