December 18, 2021
ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಯ ಉದ್ಘಾಟನೆ ನೆರವೇರಿತು. ಕುಂದಾಪುರ ಪೋಲಿಸ್ ಉಪನಿರೀಕ್ಷಕರಾದ ಶ್ರೀ ಸದಾಶಿವ್ ಆರ್. ಗೌರೋಜಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿ ಅವರು ಈ ವಯೋಮಾನದ ವಿದ್ಯಾರ್ಥಿಗಳಿಗೆ ಅತಿ ಅಗತ್ಯವಾದ ತರಬೇತಿಯ ಅವಕಾಶ ಈ ಕಾಲೇಜಿನಲ್ಲಿ ನಿಮಗೆಲ್ಲ ದೊರಕಿದೆ. ಅದನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರಿ ಪಡೆಯಿರಿ. ಒಳ್ಳೆಯ ಗುರಿ ನಿಮ್ಮದಿರಲಿ, ಅದನ್ನು ಸಾಧಿಸುವ ಶ್ರದ್ಧೆಯಿರಲಿ, ಖಂಡಿತ ನೀವು ಸಾಧಿಸುತ್ತಿರಿ ಎಂದು ಸ್ಪೂರ್ತಿಯುತ ಮಾತುಗಳನ್ನಾಡಿದರು. ನಂತರ ಮಾರತಹಳ್ಳಿ ಠಾಣಾ ಉಪನಿರೀಕ್ಷಕರಾದ ಅನಿತಾ ಕೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂತಹ ಪರೀಕ್ಷೆಗಳ ತರಬೇತಿ ಮಹತ್ವ, ಪರೀಕ್ಷೆಗಳನ್ನು ಇದಿರಿಸುವ ಬಗೆಯನ್ನು ತಿಳಿಸಿ, ನಮ್ಮ ಭಾಗದ ಪ್ರತಿಭಾವಂತರು ಸರಕಾರಿ ವಲಯದ ಉನ್ನತ ಹುದ್ದೆಗೇರಲಿ ಎಂದು ಶುಭ ಹಾರೈಸಿ, ಎಸ್‌ಡಿಎ, ಎಫ್‌ಡಿಎ, ಬ್ಯಾಂಕಿಂಗ್ ಹುದ್ದೆಗಳು, ಪಿಡಿಓ, ಪೋಲಿಸ್ ಇಲಾಖೆ, ಅಂಚೆ ಇಲಾಖೆ, ಆರೋಗ್ಯ, ಹೀಗೆ ಎಲ್ಲಾ ತರಹದ ಸರ್ಕಾರಿ ಪರೀಕ್ಷೆಗಳನ್ನು ಎದುರಿಸುವ ತರಬೇತಿ ಇಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಸೃಷ್ಠಿ ಇನ್ಛೋಟೆಕ್‌ನ ರೂವಾರಿಗಳಾದ ಹರ್ಷವರ್ಧನ ಶೆಟ್ಟಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸುಧೀರ್ ಕುಮಾರ್ ಸ್ವಾಗತಿಸಿದರು, ಉಪನ್ಯಾಸಕಿ ಜ್ಯೋತಿ ಮೊಗವೀರ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿನಿ ಶಿವಾನಿ ನಿರೂಪಿಸಿದರು.