Banner

July 19, 2021

ಡಾಕ್ಟರ್ ಬಸ್ರೂರು ಭುಜಂಗ ಹೆಗ್ಡೆಯವರ ನೆನಪಿನಲ್ಲಿ; ಬಿ.ಬಿ ಹೆಗ್ಡೆ ಕಾಲೇಜನ್ನು ನಿರ್ಮಿಸಲು ಸ್ಥಳದಾನ ಮಾಡಿದ ಪ್ರತಿಷ್ಠಿತ ಸೌಕೂರು ಸೇರ್ವೆಗಾರ್ರ್ ಮನೆತನದ ವಿಶಾಲಾಕ್ಷಿ ಬಿ.ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು, ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಉಮೇಶ್ ಶೆಟ್ಟಿ ಕೊತ್ತಾಡಿಯವರು ಸಂಸ್ಮರಣಾ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೊವಾಡಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಗ್ಲಿಷ್ ಉಪನ್ಯಾಸಕಿಯಾದ ಶ್ರೀಮತಿ ದೀಪಿಕಾ ರಾಘವೇಂದ್ರ ಮತ್ತು ಭೌತಶಾಸ್ತ್ರ ಉಪನ್ಯಾಸಕಿ ಕುಮಾರಿ ದೀಕ್ಷಿತಾ ಪ್ರಾರ್ಥನೆಗೈದರು. ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ರೇಷ್ಮಾ ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಶ್ರೀ ಸುಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕಿಯಾದ ಕುಮಾರಿ ಪ್ರವೀಣಾ ಪೂಜಾರಿ ವಂದನಾರ್ಪಣೆಗೈದರು‌. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

© 2022 Dr. B. B. Hegde First Grade College, Kundapura - All Rights Reserved